UPI ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ನವದೆಹಲಿ :- ಈಗಾಗಲೇ ಕೇಂದ್ರ ಸರ್ಕಾರ 2,000 ವರೆಗಿನ ಯುಪಿಐ ಹಾಗೂ ರೂಪೇ (RuPay) ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಯಾವುದೇ ಬ್ಯಾಂಕ್ ಅಥವಾ ಪಾವತಿ ಸಂಸ್ಥೆಗಳು ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಬ್ಯಾಂಕ್‌ಗಳು, ಸೇವಾ ಪೂರೈಕೆದಾರರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು, ವ್ಯಾಪಾರಿಗಳಿಗೆ 2,000 ರೂ.ಗಿಂತ ಹೆಚ್ಚಿನ ಮೊತ್ತದ UPI ಪಾವತಿಗಳ ಮೇಲೆ ಶುಲ್ಕ ವಿಧಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.

UPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿಯು 22 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಇಬ & ಪಿಸಿಐ ಕೂಡ ಸೇರಿದೆ. ಮೂಲಗಳ ಪ್ರಕಾರ, ಸ್ವಯಂ-ಸುಸ್ಥಿರತೆ ಮತ್ತು ಮಾರುಕಟ್ಟೆ ವಿಸ್ತರಣೆಯಂತಹ ವಿವಿಧ ಅಂಶಗಳನ್ನು ಪರಿಗಣಿಸಿ, 2,000 ರೂ.ಗಿಂತ ಹೆಚ್ಚಿನ UPI ವಹಿವಾಟುಗಳ ಮೇಲಿನ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಕುರಿತು ಸಮಿತಿಯು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ. ಉದಾಹರಣೆಗೆ, ಬ್ರೆಜಿಲ್‌ನ PIX ವ್ಯವಸ್ಥೆಯಲ್ಲಿ ವ್ಯಾಪಾರಿ ಶುಲ್ಕವು ಸುಮಾರು ಶೇ. 0.33 ರಷ್ಟಿದ್ದರೆ, ಚೀನಾದಲ್ಲಿ ಈ ಶುಲ್ಕವು ಶೇ. 0.40 ರಷ್ಟಿದೆ.

ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ 2,000 ರೂ.ವರೆಗಿನ UPI ವಹಿವಾಟುಗಳು ಉಚಿತವಾಗಿರುತ್ತವೆ ಎಂದು ಸರ್ಕಾರ ತಿಳಿಸಿದೆ. ವ್ಯಕ್ತಿಯಿಂದ ವ್ಯಕ್ತಿಗೆ  ನಡೆಯುವ ಎಲ್ಲಾ UPI ವಹಿವಾಟುಗಳು ಕೂಡ ಉಚಿತವಾಗಿಯೇ ಮುಂದುವರಿಯಲಿವೆ.ಸೆಪ್ಟೆಂಬರ್ 14 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, RuPay ಡೆಬಿಟ್ ಕಾರ್ಡ್ ಅಥವಾ UPI ಮೂಲಕ 2,000 ರೂ.ವರೆಗಿನ ಪಾವತಿ ಮಾಡುವ ಅಥವಾ ಸ್ವೀಕರಿಸುವ ವ್ಯಕ್ತಿಯ ಮೇಲೆ ಯಾವುದೇ ಬ್ಯಾಂಕ್ ಅಥವಾ ವ್ಯವಸ್ಥೆ ಪೂರೈಕೆದಾರರು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷವಾದ ಕಾಂಗ್ರೆಸ್, UPI ವಹಿವಾಟುಗಳ ಕುರಿತಾದ ಸರ್ಕಾರದ ಅಧಿಸೂಚನೆಯನ್ನು ಟೀಕಿಸಿದ್ದು, ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರವು ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಿದೆ.

Related Posts

45 ವರ್ಷದ ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

ಮಧ್ಯಪ್ರದೇಶ :- 45 ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಕಳ್ಳತನ ಪ್ರಕರಣಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ, ಅಂತ್ಯ ಸಿಕ್ಕಿದ್ದು ವಿಧಿ -ವಿಜ್ಞಾನ, ಅಥವಾ ಸುಳಿವುಗಳಿಂದಲ್ಲ, ಬದಲಾಗಿ ಸಾಮಾಜಿಕ ಮಾಧ್ಯಮ ಪ್ರವೃತ್ತಿ ಮತ್ತು ಕೇವಲ ಮೋಜಿಗಾಗಿ ಬಳಸಲಾದ AI ಉಪಕರಣದಿಂದ! ಮಧ್ಯಪ್ರದೇಶದ ಉಜ್ಜಯಿನಿಯ ಆಭರಣ…

ವಂದೇ ಮಾತರಂ’ ಚರಣ ಕಡಿತ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

ರಾಜ್ಯ ಸರ್ಕಾರವು ಇತ್ತೀಚೆಗೆ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ, ವಕೀಲ ಗಿರೀಶ್ ಭಾರದ್ವಾಜ್ ಅವರು ವಕೀಲ ಅಂಗದ್ ಕಾಮತ್ ಅವರ ಮೂಲಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ…

You Missed

45 ವರ್ಷದ ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

45 ವರ್ಷದ  ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

UPI ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

UPI  ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ವಂದೇ ಮಾತರಂ’ ಚರಣ ಕಡಿತ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

ವಂದೇ ಮಾತರಂ’ ಚರಣ ಕಡಿತ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

ಸೆಪ್ಟೆಂಬರ್ 11ರ ಚಿನ್ನದ ದರ: 10 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂ ಇಳಿಕೆ

ಸೆಪ್ಟೆಂಬರ್ 11ರ ಚಿನ್ನದ ದರ: 10 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂ ಇಳಿಕೆ

lja5nqb73ba7bxod16

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು