ಅಕ್ಟೋಬರ್ 1 ರಿಂದ LPG ಹೊಸ ನಿಯಮ: ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಬಂದ್!

ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಆಧಾರ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಗ್ಯಾಸ್ ಬುಕ್ಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಸಬ್ಸಿಡಿ ಸೌಲಭ್ಯ ಕೂಡ ರದ್ದಾಗಲಿದೆ. ಸದ್ಯ ದೇಶದಲ್ಲಿ 27.43 ಕೋಟಿ ಗ್ರಾಹಕರು ಈಗಾಗಲೇ ಇ-ಕೆವೈಸಿ ಮುಗಿಸಿದ್ದು, ಇನ್ನು 3.16 ಕೋಟಿ ಜನರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ತೈಲ ಕಂಪನಿಗಳು ಇ-ಕೆವೈಸಿ ಮಾಡಲು ಮೂರು ಸರಳ ಮಾರ್ಗಗಳನ್ನು ಒದಗಿಸಿವೆ:

ಮನೆ ಬಾಗಿಲಲ್ಲೇ ಬಯೋಮೆಟ್ರಿಕ್: ಗ್ಯಾಸ್ ಸಿಲಿಂಡರ್ ಡೆಲಿವರಿ ನೀಡಲು ಬರುವ ವ್ಯಕ್ತಿಯ ಮೊಬೈಲ್ ಆ್ಯಪ್ ಮೂಲಕ ಬೆರಳಚ್ಚು ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು.

ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ: ಹತ್ತಿರದ ಏಜೆನ್ಸಿಗೆ ನೇರವಾಗಿ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.

ಆನ್‌ಲೈನ್ ಸೆಲ್ಫ್ ಇ-ಕೆವೈಸಿ: ಮೊಬೈಲ್ ಆ್ಯಪ್‌ಗಳ ಮೂಲಕ ಮನೆಯಲ್ಲೇ ಕುಳಿತು ಸ್ವತಃ ಮಾಡಿಕೊಳ್ಳಬಹುದು (ಇಂಡೇನ್ ಗ್ರಾಹಕರಿಗೆ ‘IndianOil One’, ಭಾರತ್ ಗ್ಯಾಸ್‌ಗೆ ‘Hello BPCL’ ಹಾಗೂ HP ಗ್ಯಾಸ್‌ಗೆ ‘HP Pay’ ಆ್ಯಪ್ ಬಳಸಿ).

ಒಂದು ವೇಳೆ ನಿಮಗೆ ಸರ್ಕಾರದ ಸಬ್ಸಿಡಿ ಬೇಡವಾಗಿದ್ದರೆ, ಬಯೋಮೆಟ್ರಿಕ್ ಅಗತ್ಯವಿಲ್ಲವೆಂದು ಮೊಬೈಲ್ ಆ್ಯಪ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬಹುದು. ಆದರೆ, ಇಂತಹ ಗ್ರಾಹಕರು ಇನ್ಮುಂದೆ ಮಾರುಕಟ್ಟೆಯ ಪೂರ್ಣ ದರ ತೆತ್ತು ಸಿಲಿಂಡರ್ ಖರೀದಿಸಬೇಕಾಗುತ್ತದೆ.

Related Posts

ಚಿನ್ನದ ದರ ಸೆಪ್ಟೆಂಬರ್ 20: ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 130 ರೂ. ಹೆಚ್ಚಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟಾರೆಯಾಗಿ 275 ರೂ.ಗಳಷ್ಟು (10 ಗ್ರಾಂಗೆ 2,750 ರೂ.) ಏರಿಕೆಯಾಗಿದೆ.…

ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಮೈಸೂರು: ಸಾರ್ವಜನಿಕವಾಗಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಮತ್ತು ಸಂಘಟಕರ…

You Missed

ಕಾಂಗ್ರೆಸ್‌ಗೆ ಕರ್ನಾಟಕವೇ ಎಟಿಎಂ, ಇದೊಂದು ‘ಪಿಕ್‌ಪಾಕೆಟ್‌’ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಕಾಂಗ್ರೆಸ್‌ಗೆ ಕರ್ನಾಟಕವೇ ಎಟಿಎಂ, ಇದೊಂದು ‘ಪಿಕ್‌ಪಾಕೆಟ್‌’ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಅಕ್ಟೋಬರ್ 1 ರಿಂದ LPG ಹೊಸ ನಿಯಮ: ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಬಂದ್!

ಅಕ್ಟೋಬರ್ 1 ರಿಂದ LPG ಹೊಸ ನಿಯಮ: ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಬಂದ್!

ಚಿನ್ನದ ದರ ಸೆಪ್ಟೆಂಬರ್ 20: ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆ!

ಚಿನ್ನದ ದರ ಸೆಪ್ಟೆಂಬರ್ 20: ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆ!

ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಏಷ್ಯನ್ ಗೇಮ್ಸ್ 2026: ಬೆಳ್ಳಿ ಶೂಟಿಂಗ್‌ನೊಂದಿಗೆ ಭಾರತದ ಪದಕದ ಖಾತೆ ಓಪನ್!

ಏಷ್ಯನ್ ಗೇಮ್ಸ್ 2026: ಬೆಳ್ಳಿ ಶೂಟಿಂಗ್‌ನೊಂದಿಗೆ ಭಾರತದ ಪದಕದ ಖಾತೆ ಓಪನ್!

ವಂದೇ ಮಾತರಂ ಪೂರ್ಣ ಗೀತೆ ವಿವಾದ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ  ಜನಾರ್ದನ ರೆಡ್ಡಿ

ವಂದೇ ಮಾತರಂ ಪೂರ್ಣ ಗೀತೆ ವಿವಾದ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ  ಜನಾರ್ದನ ರೆಡ್ಡಿ