ಏಷ್ಯನ್ ಗೇಮ್ಸ್ 2026: ಬೆಳ್ಳಿ ಶೂಟಿಂಗ್‌ನೊಂದಿಗೆ ಭಾರತದ ಪದಕದ ಖಾತೆ ಓಪನ್!

ಏಷ್ಯಾದ ಬೃಹತ್ ಕ್ರೀಡಾ ಹಬ್ಬಕ್ಕೆ “ಹೃದಯದಿಂದ ಹೃದಯಕ್ಕೆ” ಎಂಬ ಭವ್ಯ ಸಂದೇಶದೊಂದಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಎರಡನೇ ದಿನವೇ ಭಾರತ ತನ್ನ ಪದಕ ಬೇಟೆಯನ್ನು ಯಶಸ್ವಿಯಾಗಿ ಆರಂಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತದ ಎಲವೆನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ತ್ರಿವಳಿ ಪಡೆ ಭರ್ಜರಿ ಪ್ರದರ್ಶನ ನೀಡಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದೆ. ಈ ಸ್ಪರ್ಧೆಯಲ್ಲಿ ಚೀನಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ, ಆತಿಥೇಯ ಜಪಾನ್ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಮತ್ತೊಂದೆಡೆ, ವೈಯಕ್ತಿಕ ವಿಭಾಗದಲ್ಲೂ ಭಾರತೀಯ ಕ್ರೀಡಾಪಟುಗಳು ಶುಭಾರಂಭ ಮಾಡಿದ್ದು, ಸೋನಮ್ ಮಾಸ್ಕರ್ ಅವರು 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ 634.1 ಅಂಕಗಳನ್ನು ಗಳಿಸಿ ಫೈನಲ್ ಹಂತಕ್ಕೇರಿದ್ದಾರೆ. ಕೇವಲ ಶೂಟಿಂಗ್ ಮಾತ್ರವಲ್ಲದೆ, ಇತರ ಕ್ರೀಡೆಗಳಲ್ಲೂ ಭಾರತದ ಜಯಭೇರಿ ಮುಂದುವರಿದಿದೆ. ಕ್ರಿಕೆಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು ಧೂಳಿಪಟ ಮಾಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಇದೀಗ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಗಿದೆ. ಇದರೊಂದಿಗೆ ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಸಹ ಇಂದು ತಮ್ಮ ಹೈ-ವೋಲ್ಟೇಜ್ ಅಭಿಯಾನವನ್ನು ಪ್ರಾರಂಭಿಸುತ್ತಿದ್ದು, ದೇಶಕ್ಕೆ ಮತ್ತಷ್ಟು ಪದಕಗಳ ನಿರೀಕ್ಷೆ ಹೆಚ್ಚಿದೆ.

Related Posts

ಅಕ್ಟೋಬರ್ 1 ರಿಂದ LPG ಹೊಸ ನಿಯಮ: ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಬಂದ್!

ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಆಧಾರ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಗ್ಯಾಸ್ ಬುಕ್ಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಸಬ್ಸಿಡಿ ಸೌಲಭ್ಯ ಕೂಡ ರದ್ದಾಗಲಿದೆ. ಸದ್ಯ ದೇಶದಲ್ಲಿ…

ಚಿನ್ನದ ದರ ಸೆಪ್ಟೆಂಬರ್ 20: ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 130 ರೂ. ಹೆಚ್ಚಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟಾರೆಯಾಗಿ 275 ರೂ.ಗಳಷ್ಟು (10 ಗ್ರಾಂಗೆ 2,750 ರೂ.) ಏರಿಕೆಯಾಗಿದೆ.…

You Missed

ಕಾಂಗ್ರೆಸ್‌ಗೆ ಕರ್ನಾಟಕವೇ ಎಟಿಎಂ, ಇದೊಂದು ‘ಪಿಕ್‌ಪಾಕೆಟ್‌’ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಕಾಂಗ್ರೆಸ್‌ಗೆ ಕರ್ನಾಟಕವೇ ಎಟಿಎಂ, ಇದೊಂದು ‘ಪಿಕ್‌ಪಾಕೆಟ್‌’ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಅಕ್ಟೋಬರ್ 1 ರಿಂದ LPG ಹೊಸ ನಿಯಮ: ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಬಂದ್!

ಅಕ್ಟೋಬರ್ 1 ರಿಂದ LPG ಹೊಸ ನಿಯಮ: ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಬಂದ್!

ಚಿನ್ನದ ದರ ಸೆಪ್ಟೆಂಬರ್ 20: ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆ!

ಚಿನ್ನದ ದರ ಸೆಪ್ಟೆಂಬರ್ 20: ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2,750 ರೂ. ಏರಿಕೆ!

ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಏಷ್ಯನ್ ಗೇಮ್ಸ್ 2026: ಬೆಳ್ಳಿ ಶೂಟಿಂಗ್‌ನೊಂದಿಗೆ ಭಾರತದ ಪದಕದ ಖಾತೆ ಓಪನ್!

ಏಷ್ಯನ್ ಗೇಮ್ಸ್ 2026: ಬೆಳ್ಳಿ ಶೂಟಿಂಗ್‌ನೊಂದಿಗೆ ಭಾರತದ ಪದಕದ ಖಾತೆ ಓಪನ್!

ವಂದೇ ಮಾತರಂ ಪೂರ್ಣ ಗೀತೆ ವಿವಾದ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ  ಜನಾರ್ದನ ರೆಡ್ಡಿ

ವಂದೇ ಮಾತರಂ ಪೂರ್ಣ ಗೀತೆ ವಿವಾದ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ  ಜನಾರ್ದನ ರೆಡ್ಡಿ