ಮಿರ್ಲೆ: ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಮಿರ್ಲೆ ಸೇರಿದಂತೆ 9 ಹಳ್ಳಿಗಳಿಗೆ ಶೋಭಾ ಕೋಟೆಗೌಡರ್ ಉಚಿತ ಮುಕ್ತಿ ರಥವನ್ನು ಕೊಡುಗೆಯಾಗಿ ನೀಡಲಾಯಿತು.
- ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಕೊಡುಗೆಯಾಗಿ ನೀಡಲಾಯಿತು
- ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಾರಾ ಮಹೇಶ್
- 9 ಗ್ರಾಮಗಳ ಮುಖಂಡರುಗಳು, ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು
ಮರಣದ ಸಂದರ್ಭದಲ್ಲಿ ಕುಟುಂಬಗಳು ಎದುರಿಸುವ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಸಮಾಜ ಸೇವಕಿ ಶೋಭಾ ಕೋಟೆಗೌಡರು ಮಹತ್ವದ ಮಾನವೀಯ ಸೇವೆಗೆ ಮುಂದಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಾರಾ ಮಹೇಶ್ ಮಾತನಾಡಿ ಮಿರ್ಲೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಉಚಿತವಾಗಿ ಶವ ಸಾಗಿಸುವ ವಾಹನ ಸೇವೆಯನ್ನು ಅವರು ಒದಗಿಸುತ್ತಿದ್ದಾರೆ. ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಶವವನ್ನು ಸ್ವಗ್ರಾಮ ಅಥವಾ ಸಂಬಂಧಿಸಿದ ಸ್ಥಳಕ್ಕೆ ಸಾಗಿಸಲು ಈ ಸೇವೆ ನೆರವಾಗಲಿದೆ ಎಂದು ತಿಳಿಸಿದರು
ಸಂಕಷ್ಟದ ಸಮಯದಲ್ಲಿ ಕುಟುಂಬಗಳ ನೋವಿಗೆ ಸ್ಪಂದಿಸಿ, ಯಾವುದೇ ಶುಲ್ಕವಿಲ್ಲದೆ ಈ ಸೇವೆ ನೀಡುತ್ತಿರುವ ಶೋಭಾ ಕೋಟೆಗೌಡರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ 9 ಗ್ರಾಮಗಳ ಮುಖಂಡರುಗಳು, ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು.




