ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 130 ರೂ. ಹೆಚ್ಚಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟಾರೆಯಾಗಿ 275 ರೂ.ಗಳಷ್ಟು (10 ಗ್ರಾಂಗೆ 2,750 ರೂ.) ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯೂ ಪ್ರತಿ ಗ್ರಾಂಗೆ 5 ರೂ. ಹೆಚ್ಚಾಗಿದ್ದು, ಕಳೆದ ಮೂರು ದಿನಗಳಲ್ಲಿ ಒಟ್ಟು 10 ರೂ.ಗಳಷ್ಟು ಜಾಸ್ತಿಯಾಗಿದೆ. ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ (ಸೆಪ್ಟೆಂಬರ್ 20): 24 ಕ್ಯಾರಟ್ ಅಪರಂಜಿ ಚಿನ್ನ (1 ಗ್ರಾಂ): ₹15,584 (10 ಗ್ರಾಂಗೆ ₹1,55,840) 22 ಕ್ಯಾರಟ್ ಆಭರಣ ಚಿನ್ನ (1 ಗ್ರಾಂ): ₹14,285 (10 ಗ್ರಾಂಗೆ ₹1,42,850) 18 ಕ್ಯಾರಟ್ ಚಿನ್ನ (1 ಗ್ರಾಂ): ₹11,688 ಬೆಳ್ಳಿ ಬೆಲೆ (1 ಗ್ರಾಂ): ₹255 (100 ಗ್ರಾಂಗೆ ₹25,500) ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (ಪ್ರತಿ ಗ್ರಾಂಗೆ):ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಕೇರಳ ಮತ್ತು ಭುವನೇಶ್ವರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ₹14,285 ಇದೆ. ದೆಹಲಿ, ಜೈಪುರ ಹಾಗೂ ಲಕ್ನೋ ನಗರಗಳಲ್ಲಿ ₹14,300 ತಲುಪಿದ್ದರೆ, ಅಹಮದಾಬಾದ್ನಲ್ಲಿ ₹14,290 ರಷ್ಟಿದೆ. ಬೆಳ್ಳಿ ಬೆಲೆಯು ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಹಲವೆಡೆ ಗ್ರಾಂಗೆ ₹255 ಇದ್ದರೆ, ಚೆನ್ನೈ, ಕೇರಳ ಹಾಗೂ ಭುವನೇಶ್ವರದಲ್ಲಿ ಗ್ರಾಂಗೆ ₹260 ರಷ್ಟಿದೆ. ಜಾಗತಿಕ ಮಾರುಕಟ್ಟೆ ಚಿತ್ರಣ:ಅಂತಾರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 140.75 ಡಾಲರ್ (ಸುಮಾರು ₹13,502) ತಲುಪಿದ್ದರೆ, ಸ್ಪಾಟ್ ಬೆಳ್ಳಿ 2.129 ಡಾಲರ್ (ಸುಮಾರು ₹204) ನಲ್ಲಿದೆ. ಜಾಗತಿಕವಾಗಿ 24 ಕ್ಯಾರಟ್ ಚಿನ್ನದ ದರವನ್ನು ಹೋಲಿಸಿದರೆ ಭಾರತದಲ್ಲಿ ಅತ್ಯಂತ ಗರಿಷ್ಠ (₹15,584) ದರವಿದ್ದು, ಸಿಂಗಾಪುರ (₹14,319), ಓಮನ್ (₹13,958), ಮಲೇಷ್ಯಾ (₹13,888), ಸೌದಿ ಅರೇಬಿಯಾ (₹13,872), ಅಮೆರಿಕ (₹13,819) ಹಾಗೂ ದುಬೈ (₹13,782) ನಗರಗಳು ನಂತರದ ಸ್ಥಾನದಲ್ಲಿವೆ. ಕುವೈತ್ನಲ್ಲಿ ಪ್ರಸ್ತುತ ಅತಿ ಕಡಿಮೆ ಅಂದರೆ ₹13,651 (40.18 ದಿನಾರ್) ದರವಿದೆ.




