ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ.

ಬಾವನಸೌಂದತ್ತಿ: ದೇವರ ಮೇಲಿನ ನಂಬಿಕೆಯು ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ. ಪಂಢರಪುರ ವಿಠ್ಠಲನ ಭಕ್ತರಾದ ಸದಾಶಿವರು ತಾಯಿಯ ಮಹದಾಸೆ ಈಡೇರಿಸಲು ಮಾಡಿದ ಸಾಹಸ ಎಲ್ಲರ ಮನಗೆದ್ದಿದೆ. ರಾಮಾಯಣದಲ್ಲಿ ಕಾಣುವ ಶ್ರವಣಕುಮಾರನ…