ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೂ ಹೀಗೆಯೇ ಇರಲಿ – ಡಾ.ಡಿ.ವೀರೇಂದ್ರ ಹೆಗ್ಗಡೆ
ಎಸ್ಐಟಿ ತನಿಖೆಯಿಂದ ಅನೇಕ ವಿಷಯಗಳು ಹೊರಗೆ ಬರುತ್ತಿವೆ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಮಂಗಳೂರು: ಎಸ್ಐಟಿ ತನಿಖೆಯಿಂದ ಅನೇಕ ವಿಷಯಗಳು ಹೊರಗೆ ಬರುತ್ತಿವೆ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ…
ಧರ್ಮಸ್ಥಳ ಪ್ರಕರಣ: ಬೆಂಗಳೂರಿನಲ್ಲಿ ಹೂಡಲ್ಪಟ್ಟ ಷಡ್ಯಂತ್ರದ ಬೃಹತ್ ಪ್ಲಾನ್ – ಚಿನ್ನಯ್ಯ ಸಮ್ಮುಖದಲ್ಲಿ ಎಸ್‌ಐಟಿ ಮಹಜರು.
ಬೆಂಗಳೂರು : “ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ” ಎಂದು ಹೇಳಿದ್ದ ಚಿನ್ನಯ್ಯ ಹಿಂದಿರುವ ಗ್ಯಾಂಗ್ ಕುರಿತು ಎಸ್ಐಟಿ (SIT) ಮಹತ್ವದ ಪತ್ತೆಹಚ್ಚಿದೆ. ಧರ್ಮಸ್ಥಳದಿಂದ ಬೆನ್ನತ್ತಿದ ತನಿಖೆ ಈಗ ಬೆಂಗಳೂರಿಗೆ ಬಂದಿದ್ದು, ಇಲ್ಲಿಯೇ ಚಿನ್ನಯ್ಯ ಮತ್ತು ತಂಡವು ಪ್ಲಾನ್ ರೂಪಿಸಿದ್ದ ಸತ್ಯ ಬಹಿರಂಗವಾಗಿದೆ.…
‘ಬುರುಡೆ’ ಗ್ಯಾಂಗ್ಗೆ ನೋಟಿಸ್ ಸಾಧ್ಯತೆ? ಇವರು ಮಾಡಿದ್ದು ಅಂತಿಂತಾ ಪ್ಲಾನ್ ಅಲ್ಲ, ಬಾಯ್ಬಿಟ್ಟ ಚಿನ್ನಯ್ಯ!
ಸುಳ್ಳಿನ ಕಥೆ ಕಟ್ಟಿರೋದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ. ತಲೆ ಬುರುಡೆ ತಂದು ದೂರು ಕೊಟ್ಟ ಚಿನ್ನಯ್ಯನಿಗೆ ಆ ಬುರುಡೆ ತಂದು ಕೊಟ್ಟಿದ್ಯಾರು ಎನ್ನುವ ಬಗ್ಗೆ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನ…
ಸಮೀರ್ ವಾಯ್ಸ್ ಸ್ಯಾಂಪಲ್ ಪಡೆದು, ಯೂಟ್ಯೂಬ್‌ನಲ್ಲಿ ಮಾಡಿದ ಆರೋಪದ ಬಗ್ಗೆ ಸಾಕ್ಷಿ ಕೇಳಿದ ತನಿಖಾಧಿಕಾರಿ
ಆಗಸ್ಟ್ 24 ರಂದು ಸಮೀರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಮೀರ್ ವಾಯ್ಸ್ ಸ್ಯಾಂಪಲ್ ಕೂಡ ಪಡೆದುಕೊಂಡಿದ್ದಾರೆ. ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಮಯೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿದೆ…
ರಾಜಕೀಯ ಲಾಭಕ್ಕಾಗಿ 3 ಪಕ್ಷಗಳು ಫೈಟ್, ಧರ್ಮಸ್ಥಳ ಪ್ರಕರಣದಲ್ಲಿ ಕ್ರೆಡಿಟ್ ಪಾಲಿಟಿಕ್ಸ್..
ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಇದರ ನಡುವೆ ಇತ್ತ ಬಿಜೆಪಿ ಧರ್ಮಸ್ಥಳ ಜಾಥಾ ನಡೆಸುತ್ತಿದ್ದು ಇದರಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಜೋರಾಗಿದ್ದು ಈ ಸಂಬಂಧ…
ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ ಎಂದ ಧರ್ಮಾಧಿಕಾರಿಗಳು
“ಒಂದೊಂದೇ ಸತ್ಯಗಳು ಹೊರಗೆ ಬರುತ್ತಾ ಇದೆ” ಇದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇಂದು ನೀಡಿರುವ ಮೊದಲ ಪ್ರತಿಕ್ರಿಯೆ. ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿರುವ ಘಟನೆಗೆ ಸಂಬಂಧಿಸಿದಂತೆ ವೀರೇಂದ್ರ ಹೆಗ್ಗಡೆ ಅವರು ಮೊದಲ ಪ್ರತ್ರಿಕ್ರಿಯೆ ನೀಡಿದ್ದಾರೆ.ಈಗ ಒಂದೊಂದೇ ಸತ್ಯಗಳು…
ಮಾಸ್ಕ್ ಮ್ಯಾನ್ ಕಕ್ಕಿದ ಸತ್ಯ ಏನು ಗೊತ್ತಾ ?
ಬೆಂಗಳೂರು: ತಮಿಳುನಾಡಿನಲ್ಲಿದ್ದ ಚೆನ್ನಯ್ಯಗೆ ಹಣದ ಆಮಿಷವೊಡ್ಡಿ ಧರ್ಮಸ್ಥಳ ವಿರೋಧಿ ಗ್ಯಾಂಗ್ ಕರೆದುಕೊಂಡು ಬಂದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಹೌದು. ವಿಶೇಷ ತನಿಖಾ ತಂಡ (SIT) ತಮ್ಮ ಎಂದಿನ ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಚೆನ್ನಯ್ಯ ಸತ್ಯ ಕಕ್ಕಿ ತಪ್ಪೊಪ್ಪಿಕೊಂಡಿರುವ ವಿಚಾರ…
ಕಳಚಿತು ಮಾಸ್ಕ ಮ್ಯಾನ್ ಮುಖವಾಡ ! ಎಫ್‌ಎಸ್‌ಎಲ್‌ನಲ್ಲಿ ಬುರುಡೆ ರಹಸ್ಯ ಬಯಲು…
ಬೆಂಗಳೂರು: ಚೆನ್ನಯ್ಯ ತಂದುಕೊಟ್ಟ ಬುರುಡೆ ಎಲ್ಲಿಯದ್ದು ಎನ್ನುವುದೇ ಈಗ ದೊಡ್ಡ ಪ್ರಶ್ನೆ. ಹೌದು. ಧರ್ಮಸ್ಥಳದಲ್ಲಿ ಸಾವಿರಾರು ಮೃತದೇಹಗಳನ್ನು ನಾನು ಹೂತಿದ್ದೇನೆ ಎಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ ತನ್ನ ಎಲ್ಲಾ ಆರೋಪಗಳಿಗೆ ಸಾಕ್ಷ್ಯ ಒದಗಿಸಿದ್ದು ಯಾವುದು ಎಂದರೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದ ಬುರುಡೆ.…
ಅನಾಮಿಕ ವ್ಯಕ್ತಿಯ ನಿಜಬಣ್ಣ ಬಯಲಾಗಿದೆ. ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೆ ಇದ್ದಾರೆ ಎಂದ ಮಾಸ್ಕ್ ಮ್ಯಾನ್!
ಧರ್ಮಸ್ಥಳದ ಮಾಸ್ಕ್ ಮ್ಯಾನ್ ನಿಜ ಹೆಸರು, ನಿಜಮುಖ, ನಿಜಬಣ್ಣ ಬಯಲಾಗಿದೆ. ಮಾಸ್ಕ್ ಮ್ಯಾನ್ ಹೆಸರು ಚಿನ್ನಯ್ಯ ಅಲಿಯಾಸ್ ಚೆನ್ನ. ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳಿಗೆ ಚಿನ್ನಯ್ಯ ಹೇಳಿದ್ದಾನೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು…
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ ಭೇಟಿ ! ಹಿಂದಿನ ಕಾರಣ ಏನು ?
ಬೆಂಗಳೂರು, ಆಗಸ್ಟ್ 13: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಗುಂಪು ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಈ ಭೇಟಿಯ ಉದ್ದೇಶ ಮಂಜುನಾಥೇಶ್ವರ ದೇವರ ದರ್ಶನ ಪಡೆಯುವುದು ಎಂದು ವಿಜಯೇಂದ್ರ ಹೇಳಿದ್ದಾರೆ.…















