woman Archives - Good News 24x7 https://www.goodnews24x7.com/tag/woman/ Kannada Mon, 27 Apr 2026 12:08:33 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg woman Archives - Good News 24x7 https://www.goodnews24x7.com/tag/woman/ 32 32 ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* https://www.goodnews24x7.com/hassan-engineer-shweta-dies-after-slipping-into-coma/ Mon, 27 Apr 2026 11:52:24 +0000 https://www.goodnews24x7.com/?p=9428 ಹಾಸನದ 25ರ ಯುವ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದುಬಿದ್ದ ನಂತರ ಕೋಮಾಕ್ಕೆ ಜಾರಿದ ಶ್ವೇತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಕುಟುಂಬದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಪೋಷಕರು ಅಂಗಾಂಗ ದಾನಕ್ಕೆ ಮುಂದಾದರೂ, ಆರೋಗ್ಯ…

The post ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* appeared first on Good News 24x7.

]]>

ಹಾಸನದ 25ರ ಯುವ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದುಬಿದ್ದ ನಂತರ ಕೋಮಾಕ್ಕೆ ಜಾರಿದ ಶ್ವೇತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಕುಟುಂಬದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಪೋಷಕರು ಅಂಗಾಂಗ ದಾನಕ್ಕೆ ಮುಂದಾದರೂ, ಆರೋಗ್ಯ ಸ್ಥಿತಿಯಿಂದ ಅದು ಸಾಧ್ಯವಾಗಲಿಲ್ಲ.

ಹಾಸನ, ಏ.27: ಸಾಫ್ಟ್‌ವೇರ್ ಇಂಜಿನಿಯರ್ ಹಠಾತ್ ಸಾ*ನ್ನಪ್ಪಿರುವ ಘಟನೆ ನಡೆದಿದೆ. ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ 25 ವರ್ಷದ ಯುವತಿ ಶ್ವೇತಾ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಈ ಘಟನೆ ಇಡೀ ಗ್ರಾಮದಲ್ಲಿ ಹಾಗೂ ಕುಟುಂಬಸ್ಥರಲ್ಲಿ ಸೂತಕ ಛಾಯೆ ಆವರಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಮತ್ತು ಸರೋಜ ದಂಪತಿಯ ಪುತ್ರಿಯಾದ ಶ್ವೇತಾ(25), ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 25ರ ಶುಕ್ರವಾರ ಸಂಜೆ ಮನೆಯಲ್ಲಿದ್ದಾಗ ಶ್ವೇತಾ ಹಠಾತ್ತಾಗಿ ಕುಸಿದು ಬಿದ್ದಿದ್ದರು.
ಕುಸಿದು ಬಿದ್ದ ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ವೇಳೆಗೆ ಶ್ವೇತಾ ಕೋಮಾಗೆ ಜಾರಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವ (Brain Hemorrhage) ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಮಾಡುತ್ತಿರುವಾಗಲೇ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಶ್ವೇತಾ ಸಾ*ನ್ನಪ್ಪಿದ್ದಾರೆ.
ಮಗಳ ಸಾವಿನ ನೋವಿನ ನಡುವೆಯೂ ಪೋಷಕರು ಶ್ವೇತಾ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಆ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಲು ಮುಂದಾಗಿದ್ದರು. ಆದರೆ ಆಕೆಯ ದೇಹದ ಆರೋಗ್ಯದ ಸ್ಥಿತಿಗತಿಯಿಂದಾಗಿ ಅಂಗಾಂಗ ದಾನ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇಂದು ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಯುವತಿಯ ಅಂತ್ಯಕ್ರಿಯೆ ನಡೆಯಲಿದೆ. ತುಂಬು ವಯಸ್ಸಿನ ಮಗಳ ಹಠಾತ್ ಸಾ*ನಿಂದ ಗಂಗಾಧರ್ ಕುಟುಂಬ ಕಂಗಾಲಾಗಿದ್ದು, ಹಸನ್ಮುಖಿ ಯುವತಿಯ ಸಾವಿಗೆ ಮ್ಯಾಗ್ನಾ ಸಾಫ್ಟ್ ಕಂಪನಿಯ ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

The post ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ* appeared first on Good News 24x7.

]]>
ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆ: ಶೋಧ ಕಾರ್ಯ ಮುಂದುವರಿಕೆ. https://www.goodnews24x7.com/woman-goes-missing-after-trekking-in-tadiyandamol-hills-search-continues/ Fri, 03 Apr 2026 08:13:19 +0000 https://www.goodnews24x7.com/?p=9112 ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಶರಣ್ಯ (36) ಎಂದು ಗುರುತಿಸಲಾಗಿದೆ. ಅವರು ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದು, ಅಲ್ಲಿಂದ ಟ್ರೆಕ್ಕಿಂಗ್‌ಗೆ ಒಬ್ಬರೇ ತೆರಳಿದ್ದರು. ಆನ್‌ಲೈನ್ ಮೂಲಕ ಬುಕ್ಕಿಂಗ್…

The post ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆ: ಶೋಧ ಕಾರ್ಯ ಮುಂದುವರಿಕೆ. appeared first on Good News 24x7.

]]>

ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿರುವ ಮಹಿಳೆಯನ್ನು ಶರಣ್ಯ (36) ಎಂದು ಗುರುತಿಸಲಾಗಿದೆ. ಅವರು ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದು, ಅಲ್ಲಿಂದ ಟ್ರೆಕ್ಕಿಂಗ್‌ಗೆ ಒಬ್ಬರೇ ತೆರಳಿದ್ದರು. ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡು ಬಂದಿದ್ದ ಶರಣ್ಯ ಅವರನ್ನು ಕಾಡಾನೆಗಳ ಸಂಚಾರ ಇರುವ ಪ್ರದೇಶವಾದ್ದರಿಂದ ಇತರ ಪ್ರವಾಸಿಗರ ಜೊತೆ ಕಳುಹಿಸಲಾಗಿತ್ತು.

ಆದರೆ, ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂದಿರುಗಿದ್ದರೂ ಶರಣ್ಯ ಮಾತ್ರ ಮರಳಿ ಬರದ ಹಿನ್ನೆಲೆ ಆತಂಕ ಉಂಟಾಗಿದೆ. ಈ ವಿಷಯವನ್ನು ಸ್ಥಳೀಯ ನಿವಾಸಿ ಕುಡಿಯರ ಮುತ್ತಪ್ಪ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಬೆಟ್ಟದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದರೂ ಮಹಿಳೆಯ ಸುಳಿವು ಇನ್ನೂ ಸಿಗಲಿಲ್ಲ.

ಇನ್ನೂ ಇಂದು ಕೂಡ ಶೋಧ ಕಾರ್ಯ ಮುಂದುವರಿದಿದ್ದು, ಮಹಿಳೆಯ ಮೊಬೈಲ್ ಕೇರಳ ನೆಟ್‌ವರ್ಕ್‌ನಲ್ಲಿ ಸಿಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ತಂಡಗಳು ಬೆಟ್ಟದ ಪ್ರದೇಶದಲ್ಲಿ ತಂಗಿದ್ದು ಶೋಧ ಕಾರ್ಯ ತೀವ್ರಗೊಳಿಸಿವೆ.

The post ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆ: ಶೋಧ ಕಾರ್ಯ ಮುಂದುವರಿಕೆ. appeared first on Good News 24x7.

]]>
ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ! https://www.goodnews24x7.com/a-woman-drives-an-auto-with-her-little-child-sitting-next-to-hera-woman-drives-an-auto-with-her-little-child-sitting-next-to-her/ Thu, 12 Mar 2026 06:55:04 +0000 https://www.goodnews24x7.com/?p=8872   ತಾಯಿಯ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಬ್ಬ ಮಹಿಳೆ ತಾಯಿ ಹಾಗೂ ತಂದೆ ಎರಡು ಆಗಿ ಮಕ್ಕಳಿಗೆ ಭದ್ರ ಭವಿಷ್ಯ ಕಟ್ಟಿಕೊಡುತ್ತಾಳೆ. ಈ ದೃಶ್ಯ ನೋಡಿದ್ರೆ ನಿಮಗೂ ಹಾಗೆಯೇ ಅನಿಸಬಹುದು. ಇದೀಗ ತನ್ನ ಪುಟ್ಟ ಪ್ರಪಂಚವಾಗಿರುವ ಮಗಳ ಭವಿಷ್ಯಕ್ಕಾಗಿ…

The post ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ! appeared first on Good News 24x7.

]]>

 

ತಾಯಿಯ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಬ್ಬ ಮಹಿಳೆ ತಾಯಿ ಹಾಗೂ ತಂದೆ ಎರಡು ಆಗಿ ಮಕ್ಕಳಿಗೆ ಭದ್ರ ಭವಿಷ್ಯ ಕಟ್ಟಿಕೊಡುತ್ತಾಳೆ. ಈ ದೃಶ್ಯ ನೋಡಿದ್ರೆ ನಿಮಗೂ ಹಾಗೆಯೇ ಅನಿಸಬಹುದು. ಇದೀಗ ತನ್ನ ಪುಟ್ಟ ಪ್ರಪಂಚವಾಗಿರುವ ಮಗಳ ಭವಿಷ್ಯಕ್ಕಾಗಿ ಆಟೋ ಓಡಿಸುವ ಮಹಿಳೆಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ಈ ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ತಾಯಿ ಅಂದ್ರೇನೆ ಹಾಗೆ, ತಮ್ಮ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು ಇಲ್ಲೊಬ್ಬಳು ತಾಯಿ ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಾ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಳೆ. ಈ ಆಟೋ ಚಾಲಕಿ ಹೆಸರು ಕೋಮಲ್ ಗಾಯಕ್ವಾಡ್ . ಪತಿ ಬಿಟ್ಟು ಹೋದ ಬಳಿಕ ಈ ಮಹಿಳೆಗೆ ಮಗಳೇ ಪ್ರಪಂಚವಾಗಿದ್ದಾಳೆ. ಈ ತಾಯಿಯೊಬ್ಬಳ ಹೋರಾಟದ ಬದುಕಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಕಣ್ಣೀರು ಸುರಿಸಿದ್ದಾರೆ.

ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿಈ ಆಟೋ ಚಾಲಕಿ ತನ್ನ ಬದುಕಿನ ಕಥೆಯನ್ನು ತೆರೆದಿಟ್ಟಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ, ಮಕ್ಕಳು ಬೆಳಿಗ್ಗೆ 6.30ಕ್ಕೆ ಗಾಢ ನಿದ್ರೆಯಲ್ಲಿದ್ರೆ ತೇಜು ನನ್ನ ಜತೆಗೆ ಆಟೋ ಹತ್ತಿರ್ತಾಳೆ. ಇಡೀ ದಿನ ಆಟೋದಲ್ಲಿ ಕುಳಿತುಕೊಳ್ಳುತ್ತಾಳೆ. ತಿಂಡಿ, ಊಟ ನಿದ್ರೆ ಎಲ್ಲವೂ ಆಟೋದಲ್ಲೇ. ಪರ್ಭಾನಿಯಲ್ಲಿ ಜನಿಸಿದ ನಾನು ಆರ್ಥಿಕ ಸಮಸ್ಯೆ ಕಾರಣಕ್ಕೆ 10ನೇ ತರಗತಿ ಪೂರ್ಣಗೊಳಿಸಿ ಮನೆಯಲ್ಲೇ ಉಳಿದೆ. ಮನೆಯವರ ಮಾತಿನಂತೆ ಮದುವೆಯಾದೆ. ಮದುವೆ ಆದ್ಮೇಲೆ 2018ರಲ್ಲಿ ಕಲ್ಯಾಣ್ ಗೆ ಬಂದೆ. 2022ರಲ್ಲಿ ನಮ್ಮ ಮಡಿಲಿಗೆ ಮಗಳು ಬಂದಳು. ನಮ್ಮ ಪುಟ್ಟ ಪ್ರಪಂಚಕ್ಕೆ ತೇಜು ಎಂದು ಕೋಮಲ್ ನಾಮಕರಣ ಮಾಡಿದೆವು. ಮಗಳಿಗೆ 18 ತಿಂಗಳಾಗ್ತಿದ್ದಂತೆ ಎಲ್ಲ ಬದಲಾಗಿ ಹೋಯ್ತು.

ಪರ್ಭಾನಿಗೆ ಹೋಗಿ ಬರ್ತೇನೆ ಎಂದಿದ್ದ ನನ್ನ ಪತಿ, ತಿಂಗಳಾದ್ರೂ ಮನೆಗೆ ಬರಲಿಲ್ಲ. ನೆಪ ಹೇಳಿಕೊಂಡು ಮನೆಗೆ ಬರೋದನ್ನೇ ಬಿಟ್ಟ. ಹೀಗಾಗಿ ಮಗಳ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ದುಡಿಯುವುದು ಅನಿವಾರ್ಯವಾಯ್ತು, ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲ್ಸಕ್ಕೆ ಸೇರಿಕೊಂಡೆ. ಮಗಳನ್ನು ಮನೆಯಲ್ಲೇ ಬಿಟ್ಟು ಬರಬೇಕಾಗಿತ್ತು. ಆಗ ಆಟೋ ಓಡಿಸುವ ನಿರ್ಧಾರ ಮಾಡಿಕೊಂಡೆ. ದಿನಕ್ಕೆ 400- 500 ರೂಪಾಯಿ ಸಂಪಾದನೆ ಮಾಡುತ್ತೇನೆ. ತಿಂಗಳ ಬಾಡಿಗೆ, ದಿನಸಿಗೆ ದುಡಿದ ಹಣವೆಲ್ಲವು ಖರ್ಚು ಆಗ್ತಿದೆ . ಮಗಳಿಗೆ ಸುಂದರ ಭವಿಷ್ಯ ಕಟ್ಟುವ ಭರವಸೆಯಲ್ಲಿ ದಿನನಿತ್ಯ ಹೋರಾಟ ಎಂದು ಬರೆದುಕೊಂಡಿದ್ದಾರೆ.ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಟೋ ಓಡಿಸುತ್ತಿದ್ದರೆ ಪುಟ್ಟ ಕಂದಮ್ಮ ಆಟೋದ ಸೀಟ್‌ನ ಪಕ್ಕ ಮಗಳಿಗಾಗಿ ಸೀಟ್‌ ಮಾಡಿಕೊಟ್ಟಿದ್ದಾಳೆ. ಪುಟ್ಟ ಹುಡುಗಿಯೂ ಆಟೋದಲ್ಲಿ ತನ್ನ ತಾಯಿ ಪಕ್ಕ ಕುಳಿತುಕೊಂಡಿರುವುದನ್ನು ಕಾಣಬಹುದು. ಈ ಪುಟಾಣಿಗೆ ಅಮ್ಮ ಕೈ ತುತ್ತು, ಪ್ರೀತಿ ಎಲ್ಲವೂ ಈ ಆಟೋದಲ್ಲೇ ಸಿಗುವುದನ್ನು ನೋಡಬಹುದು.

The post ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ! appeared first on Good News 24x7.

]]>
ಮಹಿಳೆಯೊಬ್ಬಳು ಕಾವೇರಿ ನದಿಗೆ ಹಾರಿ ಮಹಿಳೆ ಆ*ಹ* https://www.goodnews24x7.com/woman-commits-suicide-by-jumping-into-cauvery-river/ Wed, 04 Mar 2026 10:19:55 +0000 https://www.goodnews24x7.com/?p=8627 ಚಾಮರಾಜನಗರ: ಕಾವೇರಿ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರಶ್ಮಿ (39) ಎಂದು ಗುರುತಿಸಲಾಗಿದೆ. ಈಕೆ ಪತಿ ಲೋಕೇಶ್ ಹಾಗೂ ಮಕ್ಕಳ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಳು. ಸಂಸಾರದ…

The post ಮಹಿಳೆಯೊಬ್ಬಳು ಕಾವೇರಿ ನದಿಗೆ ಹಾರಿ ಮಹಿಳೆ ಆ*ಹ* appeared first on Good News 24x7.

]]>

ಚಾಮರಾಜನಗರ: ಕಾವೇರಿ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರಶ್ಮಿ (39) ಎಂದು ಗುರುತಿಸಲಾಗಿದೆ. ಈಕೆ ಪತಿ ಲೋಕೇಶ್ ಹಾಗೂ ಮಕ್ಕಳ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಳು. ಸಂಸಾರದ ವಿಚಾರದಲ್ಲಿ ಬೇಸತ್ತು ವೆಸ್ಲಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಶವವನ್ನು ನದಿಯಿಂದ ಪೊಲೀಸರು ಮೇಲೆತ್ತಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

The post ಮಹಿಳೆಯೊಬ್ಬಳು ಕಾವೇರಿ ನದಿಗೆ ಹಾರಿ ಮಹಿಳೆ ಆ*ಹ* appeared first on Good News 24x7.

]]>
ಇರುವೆಗಳಿಗೆ ಹೆದರಿ ಆ*ಹ*ಗೆ ಶರಣಾದ ಮಹಿಳೆ! https://www.goodnews24x7.com/woman-commits-suicide-due-to-fear-of-ants/ Fri, 07 Nov 2025 10:36:25 +0000 https://www.goodnews24x7.com/?p=8057 ಹೈದರಾಬಾದ್: ಬಾಲ್ಯದ ಆಘಾತಗಳು ಅಥವಾ ಇತರೆ ಕಾರಣಗಳಿಂದಾಗಿ ಬಹುತೇಕ ರಲ್ಲಿ ಒಂದಲ್ಲಾ ಒಂದು ಭಯ ಸುಪ್ತವಾಗಿ ಇರುವುದು ಸಹಜ. ಕೆಲವರಲ್ಲಿ ಅದು ಅತಿರೇಕಕ್ಕೆ ಹೋಗುವುದನ್ನೂ ಕಾಣಬಹುದು. ಹೀಗಿರುವಾಗ, ತೆಲಂಗಾಣದ ಮಹಿಳೆಯೊಬ್ಬರು ತಮ್ಮ ಮನೆ ಯಲ್ಲಿದ್ದ ಇರುವೆಗಳಿಗೆ ಹೆದರಿ, ಆ*ಹ*ಗೆ ಮಾಡಿಕೊಂಡ ಘಟನೆ…

The post ಇರುವೆಗಳಿಗೆ ಹೆದರಿ ಆ*ಹ*ಗೆ ಶರಣಾದ ಮಹಿಳೆ! appeared first on Good News 24x7.

]]>

ಹೈದರಾಬಾದ್: ಬಾಲ್ಯದ ಆಘಾತಗಳು ಅಥವಾ ಇತರೆ ಕಾರಣಗಳಿಂದಾಗಿ ಬಹುತೇಕ ರಲ್ಲಿ ಒಂದಲ್ಲಾ ಒಂದು ಭಯ ಸುಪ್ತವಾಗಿ ಇರುವುದು ಸಹಜ. ಕೆಲವರಲ್ಲಿ ಅದು ಅತಿರೇಕಕ್ಕೆ ಹೋಗುವುದನ್ನೂ ಕಾಣಬಹುದು. ಹೀಗಿರುವಾಗ, ತೆಲಂಗಾಣದ ಮಹಿಳೆಯೊಬ್ಬರು ತಮ್ಮ ಮನೆ ಯಲ್ಲಿದ್ದ ಇರುವೆಗಳಿಗೆ ಹೆದರಿ, ಆ*ಹ*ಗೆ ಮಾಡಿಕೊಂಡ ಘಟನೆ ನಡೆದಿದೆ.

 

 

 

 

 

ಬಾಲ್ಯದಿಂದಲೂ ಇರುವೆಗಳನ್ನು ಕಂಡರೆ ಭಯಭೀತರಾಗುತ್ತಿದ್ದ 25 ವರ್ಷದ ಮಹಿಳೆ, ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ತಮ್ಮ 3 ವರ್ಷದ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿದ್ದರು. ಸಂಜೆ ಅವರ ಪತಿ ಮನೆಗೆ ಮರಳಿದಾಗ ಬಾಗಿಲು ಒಳಗಿನಿಂದ ಮುಚ್ಚಲ್ಪಟ್ಟಿದ್ದನ್ನು ಗಮನಿಸಿ, ನೆರೆ ಹೊರೆಯವರ ಸಹಾಯದೊಂ ದಿಗೆ ಅದನ್ನು ತೆರೆದಿದ್ದಾರೆ. ಆಗ ಮಹಿಳೆ ಸೀರೆಯ ಸಹಾಯದಿಂದ ಫ್ಯಾನ್‌ಗೆ ನೇ* ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲೇ ದೊರೆತ ಮರಣಪತ್ರದಲ್ಲಿ, ‘ನನಗೆ ಈ ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ. ನೀವು(ಪತಿ) ಮತ್ತು ಮಗಳು ಕ್ಷೇಮವಾಗಿರಿ’ ಎಂದು ಬರೆಯಲಾಗಿತ್ತು.

The post ಇರುವೆಗಳಿಗೆ ಹೆದರಿ ಆ*ಹ*ಗೆ ಶರಣಾದ ಮಹಿಳೆ! appeared first on Good News 24x7.

]]>
ದೇವನಹಳ್ಳಿ ಫ್ಲೈಓವರ್‌ನಲ್ಲಿ ಹಿಟ್ ಅಂಡ್ ರನ್ ದುರಂತ: ಮಹಿಳೆ ದುರ್ಮರಣ. https://www.goodnews24x7.com/hit-and-run-tragedy-on-devanahalli-flyover-woman-dies/ Sun, 24 Aug 2025 08:09:34 +0000 https://www.goodnews24x7.com/?p=6646 ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ ಬಳಿ ಬಚ್ಚಹಳ್ಳಿ ಫ್ಲೈಓವರ್ ಮೇಲೆ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ಚಾಲಕನ ನಿರ್ಲಕ್ಷ್ಯದಿಂದ ಈ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಬೆಂಗಳೂರು…

The post ದೇವನಹಳ್ಳಿ ಫ್ಲೈಓವರ್‌ನಲ್ಲಿ ಹಿಟ್ ಅಂಡ್ ರನ್ ದುರಂತ: ಮಹಿಳೆ ದುರ್ಮರಣ. appeared first on Good News 24x7.

]]>

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ ಬಳಿ ಬಚ್ಚಹಳ್ಳಿ ಫ್ಲೈಓವರ್ ಮೇಲೆ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ಚಾಲಕನ ನಿರ್ಲಕ್ಷ್ಯದಿಂದ ಈ ಹಿಟ್ ಅಂಡ್ ರನ್ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಬೆಂಗಳೂರು ಬಾಣಸವಾಡಿಗೆ ಸೇರಿರುವ 31 ವರ್ಷದ ನೇತ್ರಾವತಿ ಎಂದು ಗುರುತಿಸಲಾಗಿದೆ. ಅವರು ಪತಿಯೊಂದಿಗೆ ಬೈಕ್‌ನಲ್ಲಿ ಚಿಕ್ಕಬಳ್ಳಾಪುರದತ್ತ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಮಾಹಿತಿಯಂತೆ, ಕಾರು ಹಿಂದಿನಿಂದ ಬಂದು ಬೈಕ್‌ಗೆ ಗುದ್ದಿದೆ. ಪರಿಣಾಮವಾಗಿ ನೇತ್ರಾವತಿ ಸಮತೋಲನ ತಪ್ಪಿ ಫ್ಲೈಓವರ್ ಮೇಲಿಂದ ಕೆಳಗೆ ಬಿದ್ದು ತೀವ್ರವಾಗಿ ತಲೆಗೆ ಪೆಟ್ಟು ಬಿದ್ದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಅಲ್ಲಿ ನಿಂತು ಸಹಾಯ ಮಾಡದೆ ಕಾರು ಸಮೇತ ಪರಾರಿಯಾಗಿದ್ದಾನೆ. ಈ ಕುರಿತು ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಮತ್ತು ಚಾಲಕನ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯ ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಘಟನೆ ದೇವನಹಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ

The post ದೇವನಹಳ್ಳಿ ಫ್ಲೈಓವರ್‌ನಲ್ಲಿ ಹಿಟ್ ಅಂಡ್ ರನ್ ದುರಂತ: ಮಹಿಳೆ ದುರ್ಮರಣ. appeared first on Good News 24x7.

]]>
ನಾಯಿ ಕಚ್ಚಿದ್ದರಿಂದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! https://www.goodnews24x7.com/college-student-gets-17-stitches-on-face-after-dog-bite/ Sat, 23 Aug 2025 13:54:03 +0000 https://www.goodnews24x7.com/?p=6598 ಕಾನ್ಪುರ, ಆಗಸ್ಟ್ 23: ಕಾನ್ಪುರದಲ್ಲಿ (Kanpur) 21 ವರ್ಷದ ಬಿಬಿಎ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ ಮಾಡಿವೆ. ಆಕೆಯ ಮುಖಕ್ಕೆ ತೀವ್ರ ಗಾಯಗಳು ಉಂಟಾಗಿದ್ದು, 17 ಹೊಲಿಗೆಗಳನ್ನು ಹಾಕಲಾಗಿದೆ. ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 21 ವರ್ಷದ ಯುವತಿಯ ಮೇಲೆ…

The post ನಾಯಿ ಕಚ್ಚಿದ್ದರಿಂದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! appeared first on Good News 24x7.

]]>

ಕಾನ್ಪುರ, ಆಗಸ್ಟ್ 23: ಕಾನ್ಪುರದಲ್ಲಿ (Kanpur) 21 ವರ್ಷದ ಬಿಬಿಎ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ ಮಾಡಿವೆ. ಆಕೆಯ ಮುಖಕ್ಕೆ ತೀವ್ರ ಗಾಯಗಳು ಉಂಟಾಗಿದ್ದು, 17 ಹೊಲಿಗೆಗಳನ್ನು ಹಾಕಲಾಗಿದೆ. ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 21 ವರ್ಷದ ಯುವತಿಯ ಮೇಲೆ ಬೀದಿ ನಾಯಿಗಳು (Stray Dog Attack) ಕ್ರೂರವಾಗಿ ದಾಳಿ ಮಾಡಿವೆ. ಈ ದಾಳಿಯಿಂದ ಆಕೆಯ ಮುಖದ ಮೇಲೆ ಆಳವಾದ ಗಾಯಗಳಾಗಿದ್ದು, ವೈದ್ಯರು ಆಕೆಯ ಕೆನ್ನೆಗೆ 17 ಹೊಲಿಗೆಗಳನ್ನು ಹಾಕಿದ್ದಾರೆ. ಬೀದಿ ನಾಯಿಗಳು ಅವಳನ್ನು ನೆಲಕ್ಕೆ ಎಳೆದುಕೊಂಡು ಮುಖ ಮತ್ತು ದೇಹದ ಮೇಲೆ ಕ್ರೂರವಾಗಿ ದಾಳಿ ಮಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

The post ನಾಯಿ ಕಚ್ಚಿದ್ದರಿಂದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! appeared first on Good News 24x7.

]]>
“ಟೀ-ಶರ್ಟ್ ಮೇಲೆ ನನ್ನ ಫೋಟೋ ಯಾಕೆ? ಪ್ರಿಯಾಂಕಾ ಗಾಂಧಿ ವಿರುದ್ಧ ಮಿಂಟಾ ದೇವಿಯ ಕಿಡಿ!” https://www.goodnews24x7.com/%e1%b9%adi-sar%e1%b9%ad-mele-nanna-pho%e1%b9%ado-yake-priya%e1%b9%85ka-gandhi-viruddha-mi%e1%b9%87%e1%b9%ada-deviya-ki%e1%b8%8di-sivan-biharada-matadarara-pa%e1%b9%ad%e1%b9%adiya-pari/ Wed, 13 Aug 2025 07:56:03 +0000 https://www.goodnews24x7.com/?p=6014 ಸಿವಾನ್:‌ ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆಯಲ್ಲಿ, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಹಾರದ ಮತದಾರರ ಪಟ್ಟಿಯಲ್ಲಿ 124 ವರ್ಷದ ಮಹಿಳೆ ಎಂದು ನಮೂದಾಗಿರುವ ಮಿಂಟಾ ದೇವಿ ಎಂಬ ಮಹಿಳೆಯ ಫೋಟೋ ಇರುವ…

The post “ಟೀ-ಶರ್ಟ್ ಮೇಲೆ ನನ್ನ ಫೋಟೋ ಯಾಕೆ? ಪ್ರಿಯಾಂಕಾ ಗಾಂಧಿ ವಿರುದ್ಧ ಮಿಂಟಾ ದೇವಿಯ ಕಿಡಿ!” appeared first on Good News 24x7.

]]>

ಸಿವಾನ್:‌ ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆಯಲ್ಲಿ, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಹಾರದ ಮತದಾರರ ಪಟ್ಟಿಯಲ್ಲಿ 124 ವರ್ಷದ ಮಹಿಳೆ ಎಂದು ನಮೂದಾಗಿರುವ ಮಿಂಟಾ ದೇವಿ ಎಂಬ ಮಹಿಳೆಯ ಫೋಟೋ ಇರುವ ಟೀ-ಶರ್ಟ್‌ ಧರಿಸಿದ್ದರು.

ಇದೀಗ ಮಿಂಟಾ ದೇವಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನನ್ನ ಫೋಟೋ ಇರುವ ಟೀ-ಶರ್ಟ್‌ನ್ನು ಧರಿಸಲು ನಿಮಗೆ ಅಧಿಕಾರ ನೀಡಿದವರು ಯಾರು?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸಿವಾನ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಿಂಟಾ ದೇವಿ, “ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನನ್ನ ಫೋಟೋ ಇರುವ ಟೀ-ಶರ್ಟ್‌ ಧರಿಸಿ ಪ್ರತಿಭಟನೆ ಮಾಡಿರುವುದು ಅಕ್ಷಮ್ಯ ಅಪರಾಧ” ಎಂದು ಗುಡುಗಿದ್ದಾರೆ.

“ಮತದಾರರ ಪಟ್ಟಿಯಲ್ಲಿ ನನ್ನ ವಯಸ್ಸು 124 ವರ್ಷ ಎಂದು ನಮೂದಾಗಿರುವ ಬಗ್ಗೆ ನನಗೆ 2-4 ದಿನಗಳ ಹಿಂದೆ ತಿಳಿಯಿತು. ಮತದಾರರ ಪಟ್ಟಿಯಲ್ಲಿ ಏನೋ ವ್ಯತ್ಯಾಸ ಆಗಿದೆ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನನಗೆ ಆಡಳಿತದಿಂದ ಇದುವರೆಗೂ ಯಾವ ಕರೆಯೂ ಬಂದಿಲ್ಲ. ಆದರೆ ಈ ವಿಷಯವನ್ನು ತಮ್ಮ ರಾಜಕೀಯಕ್ಕಾಗಿ ಪ್ರತಿಪಕ್ಷದವರು ಬಳಸಿಕೊಳ್ಳುತ್ತಿರುವುದನ್ನು ನಾನು ವಿರೋಧಿಸುತ್ತೇನೆ” ಎಂದು ಮಿಂಟಾ ದೇವಿ ಗುಡುಗಿದ್ದಾರೆ.

ಮುಂದುವರೆದು, “ಕಾಂಗ್ರೆಸ್‌ ನಾಯಕರು ನನ್ನ ವಯಸ್ಸಿನ ಬಗ್ಗೆ ಏಕಿಷ್ಟು ತಲೆ ಕೆಡಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನನ್ನ ವಿವರಗಳನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹವಾಗಿದೆ. ಆದರೆ ಕಾಂಗ್ರೆಸ್‌ ನಾಯಕರು ನನ್ನ ಅನುಮತಿ ಇಲ್ಲದೇ ನನ್ನ ಫೊಟೋವನ್ನು ಟೀ-ಶರ್ಟ್‌ ಮೇಲೆ ಅಚ್ಚು ಹಾಕಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗೆ ಮಾಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಮಿಂಟಾ ದೇವಿ ಖಾರವಾಗಿ ಪ್ರಶ್ನಿಸಿದ್ದಾರೆ. ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಇದೀಗ ದೇಶಾದ್ಯಂತ ಗಮನ ಸೆಳೆಯುತ್ತಿದೆ.

“ನನ್ನ ಹೆಸರನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುವುದು ನನಗೆ ಇಷ್ಟವಿಲ್ಲ. ನನಗೂ ವಿಪಕ್ಷ ನಾಯಕರಿಗೂ ಯಾವ ಸಂಬಂಧವೂ ಇಲ್ಲ. ಪ್ರಿಯಾಂಕಾ ಗಾಂಧಿ ಆಗಲಿ ಇತರ ಕಾಂಗ್ರೆಸ್‌ ನಾಯಕರಾಗಲಿ ನನಗೆ ಗೊತ್ತಿಲ್ಲ. ಹಾಗಿದ್ದ ಮೇಲೆ ಅವರು ನನ್ನ ಫೋಟೋ ಇರುವ ಟೀ-ಶರ್ಟ್‌ ಧರಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ” ಎಂದು ಮಿಂಟಾ ದೇವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧವೂ ಆಕ್ರೋಶ:
ಇನ್ನು ಮತದಾರರ ಪಟ್ಟಿಯಲ್ಲಿ ತಮ್ಮ ವಯಸ್ಸನ್ನು 124 ವರ್ಷ ಎಂದು ನಮೂದಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಿಂಟಾ ದೇವಿ, ” ಸರ್ಕಾರದ ದಾಖಲೆಗಳ ಪ್ರಕಾರ ನನ್ನ ವಯಸ್ಸು 124 ವರ್ಷ ಎಂದಾದರೆ ಸರ್ಕಾರವೇಕೆ ನನಗೆ ವೃದ್ಧಾಪ್ಯ ವೇತನ ನೀಡುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.

ನನ್ನ ಆಧಾರ್ ಕಾರ್ಡ್‌ನಲ್ಲಿ 15-07-1990 ಅನ್ನು ನನ್ನ ಜನ್ಮ ದಿನಾಂಕವಾಗಿ ಉಲ್ಲೇಖಿಸಲಾಗಿದೆ. ಅದರಂತೆ ನನಗೀಗ 35 ವರ್ಷ. ಆದರೆ ನನಗೆ 124 ವರ್ಷ ಆಗಿದೆ ಎಂದು ಹೇಳುವ ಮೂಲಕ ತಪ್ಪು ಮಾಹಿತಿ ನೀಡಲಾಗಿದೆ” ಎಂದು ಮಿಂಟಾ ದೇವಿ ತೀವ್ರ ಅಸಮಧಾನ ಹೊರಹಾಕಿದ್ದಾರೆ.

The post “ಟೀ-ಶರ್ಟ್ ಮೇಲೆ ನನ್ನ ಫೋಟೋ ಯಾಕೆ? ಪ್ರಿಯಾಂಕಾ ಗಾಂಧಿ ವಿರುದ್ಧ ಮಿಂಟಾ ದೇವಿಯ ಕಿಡಿ!” appeared first on Good News 24x7.

]]>
ಮೀನಿನ ಹೊಟ್ಟೆಯಲ್ಲಿತ್ತು ನಾಗರಹಾವು ! ಸಾರು ಮಾಡಲು ಹೋಗಿ ಶಾಕ್ ಆದ ಮಹಿಳೆ !.. https://www.goodnews24x7.com/cobra-in-fishs-stomach-woman-shocked-after-making-soup/ Mon, 11 Aug 2025 05:32:39 +0000 https://www.goodnews24x7.com/?p=5745 ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ…

The post ಮೀನಿನ ಹೊಟ್ಟೆಯಲ್ಲಿತ್ತು ನಾಗರಹಾವು ! ಸಾರು ಮಾಡಲು ಹೋಗಿ ಶಾಕ್ ಆದ ಮಹಿಳೆ !.. appeared first on Good News 24x7.

]]>

ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ.

ಹೊಟ್ಟೆಯಲ್ಲಿ ಏನಿತ್ತು..?
ಅಂತೆಯೇ ಈಗ ಮಳೆಗಾಲ ಬೇರೆ! ಕೆರೆ, ಹೊಳೆಗಳಿಗೆ ಹೋಗಿ ಮೀನು ಹಿಡಿಯುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಲಸಗಳನ್ನು ಮುಗಿಸಿ ಕೊಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ಗಾಳ ಹಾಕಿ ಕೂತಾಗ ಮೀನೊಂದು ಕಚ್ಚಿತ್ತು. ಗಾಳಕ್ಕೆ ಸಿಲುಕಿರೋದು ಪಕ್ಕಾ ಆಗ್ತಿದ್ದಂತೆಯೇ ಎಳೆದಾಗ ಬರೋಬ್ಬರಿ 900 ಗ್ರಾಂ ತೂಕ ಇರುವ ಮುರ್ರೆ ಮೀನು ಬಲೆಗೆ ಬಿದ್ದಿತ್ತು. ಇವತ್ತು ಮೀನು ಊಟ ಮಾಡಬಹುದು ಅಂತಾ ಸನೋಜ್ ಖುಷಿಯಿಂದ​ ಮನೆಗೆ ತಂದಿದ್ದರು.

ಅಂತೆಯೇ ಸನೋಜ್ ಪತ್ನಿ ಸಂಜೆ ಊಟಕ್ಕೆ ಮೀನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಳು. ಚಾಕುವಿನಿಂದ ಕತ್ತರಿಸುತ್ತಿದ್ದಾಗ ಹೊಟ್ಟೆಯಲ್ಲಿ ಹಾವಿನ ಚರ್ಮದಂಥ ವಸ್ತು ಕಂಡಿದೆ. ಅದು ಏನೆಂದು ನೋಡಲು ಇಡೀ ಹೊಟ್ಟೆ ಬಗೆದಾಗ ಎರಡು ಅಡಿ ಉದ್ದದ ನಾಗರಹಾವು ಸಿಕ್ಕಿದೆ.

ಅದನ್ನು ಹೊರತೆಗೆದು ಎಚ್ಚರಿಕೆಯಿಂದ ನೋಡಿದಾಗ.. ಹಾವಿನ ಚರ್ಮ ಈಗಾಗಲೇ ಕೊಳೆಯುತ್ತಿತ್ತು. ಹಾವಿನ ತಲೆ ಬಹುತೇಕ ಹಾಗೆಯೇ ಇತ್ತು. ತಲೆಯ ಮೇಲಿನ ವಿಶಿಷ್ಟ ಪಟ್ಟೆಗಳನ್ನು ನೋಡಿ.. ಕುಟುಂಬದ ಸದಸ್ಯರು ಅದು ನಾಗರಹಾವು ಎಂದು ಗುರುತಿಸಿದರು. ಈ ದೃಶ್ಯವನ್ನು ನೋಡಿದ ಎಲ್ಲರೂ ಆಘಾತಕ್ಕೊಳಗಾದರು. ಕೊನೆಗೆ ಹೊಲದ ಪಕ್ಕ ಗುಂಡಿ ಅಗೆದು ಹಾವನ್ನು ಹೂಳಿದ್ದಾರೆ. ಮೀನುಗಾರರು ಹೇಳುವಂತೆ, ಮುರ್ರೆ ಮೀನು ಸಣ್ಣ ಹಾವುಗಳನ್ನು ನುಂಗುತ್ತವೆ. ಆದರೆ ನಾಗರಹಾವನ್ನು ತಿಂದಿದ್ದನ್ನು ಇದೇ ಮೊದಲ ಬಾರಿಗೆ ನೋಡಿರೋದು ಎಂದಿದ್ದಾರೆ.

The post ಮೀನಿನ ಹೊಟ್ಟೆಯಲ್ಲಿತ್ತು ನಾಗರಹಾವು ! ಸಾರು ಮಾಡಲು ಹೋಗಿ ಶಾಕ್ ಆದ ಮಹಿಳೆ !.. appeared first on Good News 24x7.

]]>
ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. https://www.goodnews24x7.com/even-crores-of-rupees-were-not-enough-newlywed-woman-dies-after-consuming-pesticide-due-to-dowry-harassment/ Mon, 30 Jun 2025 08:11:36 +0000 https://www.goodnews24x7.com/?p=4845 ತಮಿಳುನಾಡು : ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಜೀವಕಳೆದುಕೊಂಡಿದ್ದಾಳೆ. ರಿಧಾನ್ಯಾ ಎಂಬ 27 ವರ್ಷದ ನವವಿವಾಹಿತೆ ಕಾರ್ ನಲ್ಲಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತೇನೆಂದು ಗಂಡನ ಮನೆಯಿಂದ ಕಾರ್ನಲ್ಲಿ ಹೊರಟ ರಿಧಾನ್ಯಾ ಕಾರ್ನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ.…

The post ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. appeared first on Good News 24x7.

]]>

ತಮಿಳುನಾಡು : ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಜೀವಕಳೆದುಕೊಂಡಿದ್ದಾಳೆ. ರಿಧಾನ್ಯಾ ಎಂಬ 27 ವರ್ಷದ ನವವಿವಾಹಿತೆ ಕಾರ್ ನಲ್ಲಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತೇನೆಂದು ಗಂಡನ ಮನೆಯಿಂದ ಕಾರ್ನಲ್ಲಿ ಹೊರಟ ರಿಧಾನ್ಯಾ ಕಾರ್ನಲ್ಲೇ ಕ್ರಿಮಿನಾಶಕ ಸೇವಿಸಿದ್ದಾರೆ.

ಈ ವರ್ಷದ ಏಪ್ರಿಲ್ನಲ್ಲಿ ಕವಿನ್ ಕುಮಾರ್ ಜೊತೆಗೆ ರಿಧಾನ್ಯಾ ವಿವಾಹ ನಡೆದಿತ್ತು. ಮದುವೆ ವೇಳೆ 70 ಲಕ್ಷ ರೂಪಾಯಿ ಮೌಲ್ಯದ ವೋಲ್ವೋ ಕಾರು, 800 ಗ್ರಾಂ ಚಿನ್ನವನ್ನು ವರದಕ್ಷಿಣೆ ಆಗಿ ರಿಧಾನ್ಯಾ ತಂದೆ ಅಣ್ಣಾದೊರೈ ಗಂಡನ ಮನೆಯವರಿಗೆ ನೀಡಿದ್ದರು. ಆದರೂ ಗಂಡನ ಮನೆಯಲ್ಲಿ ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಮಾನಸಿಕ ಕಿರುಕುಳ ತಾಳಲಾಗದೇ ನವವಿವಾಹಿತೆ ಜೀವ ಕಳೆದುಕೊಂಡಿದ್ದಾರೆ.

ಜೀವ ತೆಗೆದುಕೊಳ್ಳುವುದಕ್ಕೂ ಮೊದಲು ರಿಧಾನ್ಯ ತನ್ನ ತಂದೆ ಅಣ್ಣಾದೊರೈಗೆ 8 ವಾಯ್ಸ್ ಮೆಸೇಜ್ ಕಳಿಸಿದ್ದರು. ಈ ವಾಯ್ಸ್ ಮೇಸೇಜ್ನಲ್ಲಿ ಗಂಡ ಹಾಗೂ ಅತ್ತೆ, ಮಾವ ಕೊಡುತ್ತಿದ್ದ ಕಿರುಕುಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಜೀವ ಬಿಡುತ್ತಿರುವುದಕ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ. ಇದರ ಬಗ್ಗೆ ಯಾರಿಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಮಾತು ಕೇಳಿದವರು, ಜೀವನ ಇದೇ ರೀತಿ ಇರುತ್ತೆ, ಜೀವನದಲ್ಲಿ ಇವುಗಳ ಬಗ್ಗೆ ರಾಜೀ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.

ಅವರಿಗೆ ನನ್ನ ನೋವು ಅರ್ಥವಾಗಲ್ಲ. ನೀವು ನನ್ನ ಬಗ್ಗೆ ಅನುಮಾನ ಪಡಬಹುದು. ಆದರೇ, ನಾನು ಸುಳ್ಳು ಹೇಳುತ್ತಿಲ್ಲ. ನನ್ನ ಸುತ್ತ ಇರುವವರು ನಟಿಸುತ್ತಿದ್ದಾರೆ. ನಾನೇಕೆ ಮೌನವಾಗಿದ್ದೇನೆ ಎಂದು ನನಗೆ ಅರ್ಥವಾಗುತ್ತಿಲ್ಲ ಅಥವಾ ನಾನೇಕೆ ಈ ರೀತಿ ಇದ್ದೇನೆ. ನನ್ನ ಜೀವನ ಪೂರ್ತಿ ನಾನು ನಿಮಗೆ ಹೊರೆಯಾಗಲ್ಲ. ನಾನು ಈ ಭಾರಿ ಯಾವುದೇ ತಪ್ಪು ಮಾಡಲ್ಲ. ಈ ಜೀವನವನ್ನು ನಾನು ಇಷ್ಟಪಡಲ್ಲ. ಗಂಡ ಕವಿನ್ ಕುಮಾರ್ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ತಂದೆ ಅಣ್ಣಾದೊರೆೈಗೆ ಕಳಿಸಿದ ವಾಯ್ಸ್ ಮೇಸೇಜ್ಗಳಲ್ಲಿ ಇದೆ ಎಂದು ಹೇಳಲಾಗಿದೆ.

ಮಂಡಿಪಾಳ್ಯ ಬಳಿಯ ದೇವಸ್ಥಾನಕ್ಕೆ ಹೋಗುತ್ತೇನೆಂದು ಕಾರ್ನಲ್ಲಿ ರಿಧಾನ್ಯಾ ಹೊರಟಿದ್ದರು. ಬಳಿಕ ರಸ್ತೆ ಪಕ್ಕದಲ್ಲೇ ಕಾರ್ ನಿಲ್ಲಿಸಿ, ಕಾರ್ನಲ್ಲಿ ಕ್ರಿಮಿನಾಶಕ ಸೇವಿಸಿ ಜೀವ ಬಿಟ್ಟಿದ್ದಾರೆ. ಸ್ಥಳೀಯರು ರಸ್ತೆ ಪಕ್ಕ ಕಾರ್ ಬಹಳ ಹೊತ್ತು ನಿಂತಿರುವುದನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ಬಂದು ಕಾರ್ ಅನ್ನು ಪರಿಶೀಲಿಸಿದಾಗ, ರಿಧಾನ್ಯಾ ಕ್ರಿಮಿನಾಶಕ ಸೇವಿಸಿರುವುದು ಬೆಳಕಿಗೆ ಬಂದಿದೆ.

ರಿಧಾನ್ಯಾ ಬಾಯಿಯಿಂದ ನೊರೆ ಬಂದಿದೆ. ಪೊಲೀಸರು ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗ ಪತಿ, ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಬಿಎನ್ಎಸ್ ಕಾಯಿದೆಯ ಸೆಕ್ಷನ್ 85ರಡಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಪತಿ ಕವಿನ್ ಕುಮಾರ್, ಮಾವ ಈಶ್ವರ ಮೂರ್ತಿ, ಅತ್ತೆ ಚಿತ್ರಾದೇವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಧಾನ್ಯಾ ತಂದೆ ಅಣ್ಣಾದೊರೈ ಗಾರ್ಮೆಂಟ್ಸ್ ಫ್ಯಾಕ್ಟರಿಯ ಮಾಲೀಕರು ಆಗಿದ್ದಾರೆ.

The post ಕೋಟಿ ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಕ್ರಿಮಿನಾಶಕ ಸೇವಿಸಿ ಸಾ*ವು. appeared first on Good News 24x7.

]]>