ಕೋಮಾಗೆ ಜಾರಿದ್ದ ಹಾಸನದ ಇಂಜಿನಿಯರ್ ಶ್ವೇತಾ ಸಾ*

ಹಾಸನದ 25ರ ಯುವ ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತಾ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಮನೆಯಲ್ಲಿ ಕುಸಿದುಬಿದ್ದ ನಂತರ ಕೋಮಾಕ್ಕೆ ಜಾರಿದ ಶ್ವೇತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಕುಟುಂಬದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಪೋಷಕರು ಅಂಗಾಂಗ ದಾನಕ್ಕೆ ಮುಂದಾದರೂ, ಆರೋಗ್ಯ ಸ್ಥಿತಿಯಿಂದ ಅದು ಸಾಧ್ಯವಾಗಲಿಲ್ಲ.

ಹಾಸನ, ಏ.27: ಸಾಫ್ಟ್‌ವೇರ್ ಇಂಜಿನಿಯರ್ ಹಠಾತ್ ಸಾ*ನ್ನಪ್ಪಿರುವ ಘಟನೆ ನಡೆದಿದೆ. ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ 25 ವರ್ಷದ ಯುವತಿ ಶ್ವೇತಾ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಈ ಘಟನೆ ಇಡೀ ಗ್ರಾಮದಲ್ಲಿ ಹಾಗೂ ಕುಟುಂಬಸ್ಥರಲ್ಲಿ ಸೂತಕ ಛಾಯೆ ಆವರಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಮತ್ತು ಸರೋಜ ದಂಪತಿಯ ಪುತ್ರಿಯಾದ ಶ್ವೇತಾ(25), ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 25ರ ಶುಕ್ರವಾರ ಸಂಜೆ ಮನೆಯಲ್ಲಿದ್ದಾಗ ಶ್ವೇತಾ ಹಠಾತ್ತಾಗಿ ಕುಸಿದು ಬಿದ್ದಿದ್ದರು.
ಕುಸಿದು ಬಿದ್ದ ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ವೇಳೆಗೆ ಶ್ವೇತಾ ಕೋಮಾಗೆ ಜಾರಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವ (Brain Hemorrhage) ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಚಿಕಿತ್ಸೆ ಮಾಡುತ್ತಿರುವಾಗಲೇ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಶ್ವೇತಾ ಸಾ*ನ್ನಪ್ಪಿದ್ದಾರೆ.
ಮಗಳ ಸಾವಿನ ನೋವಿನ ನಡುವೆಯೂ ಪೋಷಕರು ಶ್ವೇತಾ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದರು. ಆ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಲು ಮುಂದಾಗಿದ್ದರು. ಆದರೆ ಆಕೆಯ ದೇಹದ ಆರೋಗ್ಯದ ಸ್ಥಿತಿಗತಿಯಿಂದಾಗಿ ಅಂಗಾಂಗ ದಾನ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇಂದು ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಯುವತಿಯ ಅಂತ್ಯಕ್ರಿಯೆ ನಡೆಯಲಿದೆ. ತುಂಬು ವಯಸ್ಸಿನ ಮಗಳ ಹಠಾತ್ ಸಾ*ನಿಂದ ಗಂಗಾಧರ್ ಕುಟುಂಬ ಕಂಗಾಲಾಗಿದ್ದು, ಹಸನ್ಮುಖಿ ಯುವತಿಯ ಸಾವಿಗೆ ಮ್ಯಾಗ್ನಾ ಸಾಫ್ಟ್ ಕಂಪನಿಯ ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

Related Posts

ಜನನ, ಮ*ರಣ ನೋಂದಣಿ ನಿಯಮ ಶೀಘ್ರವೇ ಕಠಿಣ: ಅಕ್ಟೋಬರ್ 1ರಿಂದ ಹೊಸ ತಿದ್ದುಪಡಿ ಕಾಯ್ದೆ ಜಾರಿ

ಕೇಂದ್ರ ಸರ್ಕಾರವು ಜನನ ಮತ್ತು ಮ*ರಣ ನೋಂದಣಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ಹೊಸ ತಿದ್ದುಪಡಿ ಕಾಯ್ದೆಯು ಇದೇ ಅಕ್ಟೋಬರ್ 1ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ‘ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ-2026’ಕ್ಕೆ…

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ : ಹರಿದು ಬಂತು ಶುಭಾಶಯಗಳ ಮಹಾ ಪೂರಾ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ 76ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಸೇರಿದಂತೆ ದೇಶದ ಹಲವು ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ. ಪ್ರಧಾನಿಯವರ ಹುಟ್ಟುಹಬ್ಬದ ಅಂಗವಾಗಿ…

You Missed

ಜನನ, ಮ*ರಣ ನೋಂದಣಿ ನಿಯಮ ಶೀಘ್ರವೇ ಕಠಿಣ: ಅಕ್ಟೋಬರ್ 1ರಿಂದ ಹೊಸ ತಿದ್ದುಪಡಿ ಕಾಯ್ದೆ ಜಾರಿ

ಜನನ, ಮ*ರಣ ನೋಂದಣಿ ನಿಯಮ ಶೀಘ್ರವೇ ಕಠಿಣ: ಅಕ್ಟೋಬರ್ 1ರಿಂದ ಹೊಸ ತಿದ್ದುಪಡಿ ಕಾಯ್ದೆ ಜಾರಿ

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ : ಹರಿದು ಬಂತು ಶುಭಾಶಯಗಳ ಮಹಾ ಪೂರಾ!

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ : ಹರಿದು ಬಂತು ಶುಭಾಶಯಗಳ ಮಹಾ ಪೂರಾ!

9 ಹಳ್ಳಿಗಳಿಗೆ ಶೋಭಾ ಕೋಟೆಗೌಡರ್ ಉಚಿತ ಮುಕ್ತಿ ರಥ ಕೊಡುಗೆ

9 ಹಳ್ಳಿಗಳಿಗೆ ಶೋಭಾ ಕೋಟೆಗೌಡರ್  ಉಚಿತ ಮುಕ್ತಿ ರಥ ಕೊಡುಗೆ

45 ವರ್ಷದ ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

45 ವರ್ಷದ  ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

UPI ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

UPI  ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ವಂದೇ ಮಾತರಂ’ ಚರಣ ಕಡಿತ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

ವಂದೇ ಮಾತರಂ’ ಚರಣ ಕಡಿತ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL