ಆ್ಯಂಕರ್ ಅನುಶ್ರೀ ಮದುವೆಗೆ ದಿನಾಂಕ ಫಿಕ್ಸ್?ಈಗ ಅಧಿಕೃತವಾಗುತ್ತಿದೆ.

ಪ್ರಸಿದ್ಧ ಕನ್ನಡ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿ ಈಗ ಅಧಿಕೃತವಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು ವರದಿಗಳಿವೆ. ಬೆಂಗಳೂರಿನ ಉದ್ಯಮಿಯೊಂದಿಗೆ ಅವರ ವಿವಾಹ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅನುಶ್ರೀ ಅವರು ಇನ್ನೂ ಅಧಿಕೃತವಾಗಿ ಯಾವುದೇ…

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ನಿಧನ.

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ…

ಬೆಳಗಾವಿಯ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ: ಆದೇಶ ಎತ್ತಿಹಿಡಿದ ಹೈಕೋರ್ಟ್.

ಬೆಂಗಳೂರು: ಬೆಳಗಾವಿಯ ಸುವರ್ಣಸೌಧದ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಪೊಲೀಸರು…

ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು ಎಂದ ಮನೆಯ ಮಾಲೀಕ….

ಬಾಡಿಗೆ ಮನೆ ನೀಡಲು ಈ ಮಾಲೀಕರು ಒಂದಲ್ಲ ಒಂದು ನಿಯಮಗಳನ್ನು ಮಾಡುತ್ತಾರೆ. ಬ್ಯಾಚುಲರ್​​​​ಗೆ ಬಾಡಿಗೆ ಮನೆ ನೀಡಲ್ಲ, ಒಳ್ಳೆಯ ಕೆಲಸದಲ್ಲಿ ಇದ್ರೆ ಮಾತ್ರ ಬಾಡಿಗೆ ಮನೆ , ಹೀಗೆ ಅನೇಕ ಕಾರಣಗಳು ಹಾಗೂ ನಿಯಮ, ಇದೀಗ ಮತ್ತೊಂದು ನಿಯಮ ಇದಕ್ಕೆ ಸೇರಿಕೊಂಡಿದೆ,…

ಮಗು ಮುಖ ನೋಡಿ ಭಾರತಕ್ಕೆ ವಾಪಸ್ಸಾದ ಫಿಲ್ ಸಾಲ್ಟ್.

ಐಪಿಎಲ್ 2025 ಫೈನಲ್‌ಗೆ ಮುನ್ನ ತಮ್ಮ ಮಗುವಿನ ಜನನದಿಂದಾಗಿ ತಾಯ್ನಾಡಿಗೆ ಹೋಗಿದ್ದ ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಅವರು ಅಹಮದಾಬಾದ್‌ಗೆ ಮರಳಿದ್ದಾರೆ. ತಂಡದೊಂದಿಗೆ ಸೇರಿಕೊಂಡಿರುವ ಸಾಲ್ಟ್, ಫೈನಲ್ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಅವರ ಆಗಮನವು ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.…

BBMP ಬದಲು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ಇಂದಿನಿಂದ ಜಾರಿ.

ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ ಜಾರಿಯಾಗಲಿದೆ. ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇನ್ನು ಮುಂದೆ ಬೆಂಗಳೂರು…

ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೂ ಸಹ RCB ಪ್ಲೇಆಫ್ಗೆ ಪ್ರವೇಶಿಸಿಲ್ಲ..!

ಇಂಡಿಯನ್ ಪ್ರೀಮಿಯರ್ ಲೀಗ್ನ 52 ಪಂದ್ಯಗಳು ಮುಗಿದಿವೆ. ಈ ಪಂದ್ಯಗಳ ಮುಕ್ತಾಯದ ವೇಳೆಗೆ RCB ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಈವರೆಗೆ 11 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 3 ಮ್ಯಾಚ್ಗಳಲ್ಲಿ…

ಇಂದಿನಿಂದ 5 ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಮಳೆ !

ರಾಜ್ಯದ ಹಲವೆಡೆ ಇಂದಿನಿಂದ ಏ.16ರ ವರೆಗೆ ಭಾರೀ ಗಾಳಿ, ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಗಾಳಿ ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಧಾರವಾಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು,…

ಬಿ ರಿಪೋರ್ಟ್ ಮುಡಾ ಹಗರಣ ಸಂಬಂಧ ತೀರ್ಪು ಕಾಯ್ದಿರಿಸಿದ ಕೋರ್ಟ್.

ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪನ್ನು ಏಪ್ರಿಲ್ 15ಕ್ಕೆ ಕಾಯ್ದಿರಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ…

ರೌಡಿ ಶೀಟರ್ ದೊರೆಸ್ವಾಮಿ ಹ* ಪ್ರಕರಣದಲ್ಲಿ ಎಂಟು ಮಂದಿ ಬಂಧನ; ಪ್ರೇಯಸಿ ಪೊಲೀಸ್ ವಶಕ್ಕೆ.

ಮೈಸೂರು:- ರೌಡಿ ಶೀಟರ್ ದೊರೆಸ್ವಾಮಿ ಹತ್ಯೆ ಪ್ರಕರಣದಲ್ಲಿ ಈವರೆಗೆ 8 ಮಂದಿಯನ್ನು ಬಂಧಿಸಿರುವ ಪೊಲೀಸರು, ಘಟನೆ ವೇಳೆ ದೊರೆಸ್ವಾಮಿ ಜೊತೆಯಲ್ಲಿದ್ದ ಮಹಿಳೆಯ ವಿಚಾರಣೆ ನಡೆಸಿದ್ದಾರೆ. ದೊರೆಸ್ವಾಮಿ ಕೊಲೆಯಾದ ವೇಳೆ ಜೊತೆಯಲ್ಲಿದ್ದ ಬೆಂಗಳೂರು ಮೂಲದ ಶ್ವೇತಾಳನ್ನು ಮಂಗಳವಾರ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ.…