ರಜನಿಕಾಂತ್, ಕಮಲ್ ಹಾಸನ್.. 4 ದಶಕದ ನಂತರ ಒಂದೇ ತೆರೆಯಲ್ಲಿ…..!
ದಕ್ಷಿಣ ಭಾರತದ ಸೂಪರ್ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು 46 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಲೆಜೆಂಡರಿ ಹೀರೋಗಳು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನನ ಮಾಡಲಿದ್ದಾರೆ…
ಬಾಲ್ಯ ವಿವಾಹ ಮಾಡಲು ಮುಂದಾದ ಪೋಷಕರು, ಮಕ್ಕಳ ಸಹಾಯವಾಣಿಗೆ ಪೋಷಕರ ಮೇಲೆ ದೂರು ನೀಡಿದ ಬಾಲಕಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94 ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಗೆ ಪೋಷಕರು ವಿವಾಹ ಮಾಡಲು ಯತ್ನಿಸಿದ ವಿದ್ಯಮಾನ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ…
ತಮಿಳಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’ ! ಪುನೀತ್ ಚಿತ್ರದ ನಿರ್ಮಾಪಕನಿಂದ ರಿಮೇಕ್ ಹಕ್ಕು ಖರೀದಿ.
ಕನ್ನಡದ ಸೂಪರ್ ಹಿಟ್ ಚಿತ್ರವಾದ ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕುಗಳನ್ನು ಪ್ರಸಿದ್ಧ ನಿರ್ಮಾಪಕ ಎನ್.ಎಸ್. ರಾಜಕುಮಾರ್ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಮೂಲತಃ ಕನ್ನಡದಲ್ಲಿ ಬಿಡುಗಡೆಯಾಗಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಯಶಸ್ವಿಯಾಗಿರುವ ಈ ಚಿತ್ರ ತಮಿಳು ಪ್ರೇಕ್ಷಕರನ್ನೂ ರಂಜಿಸಲಿದೆ…
ವಿಶ್ವ ದಾಖಲೆಯಾದ ‘ಶಕ್ತಿ’!
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಗಳಲ್ಲಿ ಒಂದಾದ ಶಕ್ತಿ ಯೋಜನೆ ‘ಗೋಲ್ಡನ್ ಬುಕ್…
ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ.
ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ…
ಧಾರವಾಡದಲ್ಲಿ ದುರಂತ: ಥಿನ್ನರ್ ಬಾಟಲಿ ಸ್ಪೋಟದಿಂದ ಮೃತಪಟ್ಟ ಮಗನ ನಂತರ ಇದೀಗ ತಂದೆಯೂ ಸಾವು.
ಧಾರವಾಡ : ಥಿನ್ನರ್ ಬಾಟಲಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೃತಪಟ್ಟ ನಾಲ್ಕು ವರ್ಷದ ಮಗನ ನಂತರ, ಗಂಭೀರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯೂ ಇಂದು ಮೃತಪಟ್ಟಿದ್ದಾರೆ. ಈ ಘಟನೆ ಧಾರವಾಡದ ಸಂತೋಷ್ ನಗರದಲ್ಲಿ ನಡೆದಿದೆ. ಮೃತರಾದವರು ಚಂದ್ರಕಾಂತ್…
ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ.
ಬಾವನಸೌಂದತ್ತಿ: ದೇವರ ಮೇಲಿನ ನಂಬಿಕೆಯು ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ. ಪಂಢರಪುರ ವಿಠ್ಠಲನ ಭಕ್ತರಾದ ಸದಾಶಿವರು ತಾಯಿಯ ಮಹದಾಸೆ ಈಡೇರಿಸಲು ಮಾಡಿದ ಸಾಹಸ ಎಲ್ಲರ ಮನಗೆದ್ದಿದೆ. ರಾಮಾಯಣದಲ್ಲಿ ಕಾಣುವ ಶ್ರವಣಕುಮಾರನ…
ಧರ್ಮಸ್ಥಳ ಪ್ರಕರಣ: ತಮಿಳುನಾಡಿನಲ್ಲಿ ಗುಂಪೊಂದು ಸಂಪರ್ಕಿಸಿತ್ತೆಂದು ದೂರುದಾರ ಹೇಳಿಲ್ಲ – ಎಸ್‌ಐಟಿ ಸ್ಪಷ್ಟನೆ.
ಮಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಮಿಳುನಾಡಿನಲ್ಲಿ ಗುಂಪೊಂದು ದೂರುದಾರನನ್ನು ಸಂಪರ್ಕಿಸಿತ್ತೆಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ತನಿಖೆಯ ವೇಳೆ ದೂರುದಾರನು ಯಾವುದೇ ಇಂತಹ ಹೇಳಿಕೆ ನೀಡಿಲ್ಲ ಎಂದು ಅಧಿಕಾರಿಗಳು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.…
ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ.
ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರ ‘ಧುರಂಧರ್’ ಲೇಹ್‌ನ ಸುಂದರ ಪ್ರದೆಶಗಳಲ್ಲಿ ಚಿತ್ರೀಕರಣದ ಹಂತದಲ್ಲಿತ್ತು. ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ, ಎಲ್ಲವೂ ಸಜ್ಜಾಗಿದ್ದರೂ, ಅನಾಹುತದ ಸನ್ನಿವೇಶ ಎದುರಾಗಿದೆ. ಶೂಟಿಂಗ್ ವೇಳೆ ಚಿತ್ರತಂಡದ 100ಕ್ಕೂ ಅಧಿಕ ಸದಸ್ಯರು ಏಕಾಏಕಿ ಅಸ್ವಸ್ಥರಾಗಿದ್ದು,…
ಅಮೆರಿಕದ ಕಣ್ಣಲ್ಲಿ ಭಾರತ-ಪಾಕಿಸ್ತಾನ ಮಾತ್ರ? ಯುಎಸ್ ಸಂಭಾಳಿಸುವ ಜವಾಬ್ದಾರಿ ಯಾರದ್ದು?
ವಾಷಿಂಗ್ಟನ್ ಡಿಸಿ : ಅಮೆರಿಕವನ್ನು ವಿಶ್ವದ ದೊಡ್ಡಣ್ಣ ಅಂತಾರೆ. ತನ್ನ ಅಗಾಧ ಆರ್ಥಿಕ ಮತ್ತು ಸಾಮರಿಕ ಶಕ್ತಿಯಿಂದ ಅಮೆರಿಕ ಈ ಪದವಿಯನ್ನು ಗಳಿಸಿಕೊಂಡಿದೆ. ಹಾಗಂತ ಅಮೆರಿಕ ಅಮೆರಿಕವನ್ನು ನೋಡಿಕೊಳ್ಳುವುದನ್ನು ಮರೆತರೆ, ಈ ದೊಡ್ಡಣ್ಣನ ಪದವಿ ಬಹಳ ದಿನ ಇರಲಾರದು. ಅಮೆರಿಕ ಅಧ್ಯಕ್ಷ…















